ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಸನಾತನ ಧರ್ಮದಲ್ಲಿ ಯಕ್ಷಗಾನಕ್ಕೆ ಬಹಳ ಗೌರವವಿದೆ : ಉಮೇಶ್‌ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಸೆಪ್ಟೆ೦ಬರ್ 10 , 2015
ಸೆಪ್ಟೆ೦ಬರ್ 10, 2015

ಸನಾತನ ಧರ್ಮದಲ್ಲಿ ಯಕ್ಷಗಾನಕ್ಕೆ ಬಹಳ ಗೌರವವಿದೆ : ಉಮೇಶ್‌ ಶೆಟ್ಟಿ

ನವಿ ಮುಂಬಯಿ : ಯಕ್ಷ ಸೌರಭ ಪ್ರವಾಸಿ ಮೇಳ ಕುಂದಾಪುರ ಇವರ ಯಕ್ಷ ಪಂಚಮಿ ಕಾರ್ಯಕ್ರಮದ ನಾಲ್ಕನೇ ದಿನದ ಯಕ್ಷಗಾನ ಪ್ರದರ್ಶನವು ಇತ್ತೀಚೆಗ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ಜರಗಿತು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕ್‌ ನಗರ ಥಾಣೆ ಕನ್ನಡ ಸಂಘದ ಮಾಜಿ ಅಧ್ಯಕ್ಷ ಪೊಲ್ಯ ಉಮೇಶ್‌ ಶೆಟ್ಟಿ ಅವರು ವಹಿಸಿ ಮಾತನಾಡಿ, ಧಾರ್ಮಿಕ ಪ್ರಜ್ಞೆ ಹಾಗೂ ಜ್ಞಾನವನ್ನು ನೀಡುವ ಕಲೆ ಯಕ್ಷಗಾನವಾಗಿದೆ. ಸನಾತನ ಧರ್ಮದಲ್ಲಿ ಯಕ್ಷಗಾನಕ್ಕೆ ಬಹಳಷ್ಟು ಗೌರವ ಇದೆ. ಇಂತಹ ಕಲೆಯನ್ನು ನಾವೆಲ್ಲರೂ ಗೌರವಿಸಿ ಪ್ರೋತ್ಸಾಹಿಸಬೇಕು. ಈ ಸಂಸ್ಥೆಯನ್ನು ಕೊಂಡದಕುಳಿ ಅವರು ಉಳಿಸಿ-ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಯಕ್ಷಗಾನಕ್ಕೆ ಅವರ ಸೇವೆ ಅನುಪಮವಾಗಿದೆ. ನಿಮ್ಮೆಲ್ಲರ ಕಲಾರಾಧನೆ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ನುಡಿದು ಶುಭಹಾರೈಸಿದರು.

ಅತಿಥಿಗಳಾಗಿ ನವಿಮುಂಬಯಿ ಹೊಟೇಲ್‌ ಉದ್ಯಮಿ ಜಯಪ್ರಕಾಶ್‌ ಶೆಟ್ಟಿ ಬಾಕೂìರು, ಯಕ್ಷಗಾನ ಅರ್ಥದಾರಿ ಕೊಲ್ಯಾರು ರಾಜು ಶೆಟ್ಟಿ, ನಾಗೇಶ್‌ ಶೆಟ್ಟಿ ಹೆದ್ದಾರಿಮನೆ, ಉದ್ಯಮಿಗಳಾದ ಸಂತೋಷ್‌ ಶೆಟ್ಟಿ ಮಾಳ, ಜೆ. ಎಂ. ಶೆಟ್ಟಿ ಕಲ್ವಾ, ರಾಮ ಪೂಜಾರಿ ನಾಯ್ಕನಕಟ್ಟೆ, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ಕುಟ್ಟಿ ಕುಂದರ್‌ ಉಪಸ್ಥಿತರಿದ್ದರು.

ಪ್ರವಾಸಿ ಮೇಳದ ಸಂಚಾಲಕ ಮೊಹಮ್ಮದ್‌ ಗೌಸ್‌ ಅವರು ಅತಿಥಿಗಳಿಗೆ ಪುಷ್ಪಗುತ್ಛವನ್ನಿತ್ತು ಗೌರವಿಸಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ದಾನಿ ಜಯಪ್ರಕಾಶ್‌ ಶೆಟ್ಟಿ ಬಾಕೂìರು ಮತ್ತು ಯಕ್ಷಗಾನ ಸಂಘಟಕ ರಾಮ ಪೂಜಾರಿ ನಾಯ್ಕನಕಟ್ಟೆ ಅವರನ್ನು ಅತಿಥಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಯಪ್ರಕಾಶ್‌ ಶೆಟ್ಟಿ ಅವರು, ಮೊಹಮ್ಮದ್‌ ಗೌಸ್‌ ಅವರೋರ್ವ ಮುಸ್ಲಿಂ ಧರ್ಮದವರಾದರೂ ನಮ್ಮ ಹಿಂದು ಸಂಸ್ಕೃತಿಯನ್ನು ಯಕ್ಷಗಾನ ಕಲೆಯ ಮೂಲಕ ಆರಾಧಿಸುತ್ತಿದ್ದಾರೆ. ಇದನ್ನು ಮೆಚ್ಚಲೇ ಬೇಕು. ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಬಯಲಾಟ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಹಾಗೂ ಅವರ ಸಮಿತಿಯವರು ಕಲೆಯನ್ನು ಉಳಿಸಿ-ಬೆಳೆಸಲು ಮುಂದಾಗಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು. ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಲಾಭಿಮಾನಿಗಳಿಗೆ ಜಯಪ್ರಕಾಶ್‌ ಶೆಟ್ಟಿ ಅವರ ವತಿಯಿಂದ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.





ಕೃಪೆ : udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ